74 ನೇಯ ವಾರ್ಷಿಕ ಸರ್ವ  ಸಾಧಾರಣ ಸಭೆಯಲ್ಲಿ  ಮುಖ್ಯ ಕಾರ್ಯನಿರ್ವಹಕ ಯಲ್ಲಪ್ಪ ಜಾಮಗೌಡ ತರಾಟೆಗೆ ತೆಗೆದುಕೊಂಡ ಸದಸ್ಯರುಗಳು

Sep 25, 2023 - 17:17
Sep 25, 2023 - 17:19
 0  459

ರಾಯಬಾಗ. (RNI) ರಾಯಬಾಗ ತಾಲೂಕೀನ ಹಾರೂಗೇರಿ ಪಟ್ಟಣದಲ್ಲಿ  ಹಾರೂಗೇರಿ ವಿವಿಧೋದ್ದೇಶ ಪ್ರಾಥಮಿಕ  ಗ್ರಾಮೀಣ ಕೃಷಿ ಪತ್ತಿನ  ಸಹಕಾರ ಸಂಘದ  ನಿಯಮಿತ ಹಾರೂಗೇರಿ ಸನ್  2022 ಹಾಗೂ 2023 ನೇಯ ಸಾಲಿನ  74 ನೇಯ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಸಭಾ ಭವನದಲ್ಲಿ ನಡೆಯಿತು ಈ‌ 74 ನೇಯ.

ವಾರ್ಷಿಕ ಸರ್ವ ಸಾಧಾರಣ  ಸಭೆಯ ವೇದಿಕೆ  ಕಾರ್ಯಕ್ರಮವನ್ನ ಪರಮಾನಂದವಾಡಿ ಗ್ರಾಮದ  ಶ್ರೀ ಗುರು ದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿ ಪತಿ ಡಾ// ಶ್ರೀ ಅಭಿನವ ಬ್ರಹ್ಮಾನಂದ ಸ್ವಾಮೀಜಿ  ಹಾಗೂ ವೇದಿಕೆ ಮೇಲಿದ್ದ ಗಣ್ಯರು ಜ್ಯೋತಿ ಪ್ರಜ್ವಲಿಸುವ ಮೂಲಕ   ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ‌ ಸಮಯದಲ್ಲಿ SSLC ಪರೀಕ್ಷೆ ಯಲ್ಲಿ ಹಚ್ಚಿನ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಸತ್ಕರಿಸಿ ಸನ್ಮಾನಿಸಿದರು,ಈ ಕಾರ್ಯಕ್ರಮವನ್ನ ಉದ್ದೇಶಿಸಿ  ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಪರಮಾನಂದವಾಡಿ ಶ್ರೀ ಮಠದ ಶ್ರೀಗುರು  ಡಾ//ಅಭಿನವ ಬ್ರಹ್ಮಾನಂದ ಸ್ವಾಮೀಜಿಗಳು ಆಶೀರ್ವಚನಗೈದರು.

ಇದೇ ಸಂದರ್ಭದಲ್ಲಿ ಅನೇಕ ಸದಸ್ಯರು ತಮ್ಮ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಉತ್ತರ ಪಡೆಯಲು ತವಕಿಸಿಸಿದರು.
ವೇದಿಕೆ ಮೇಲೆ ಎಲ್ಲ ಸಂಘದ ಸದಸ್ಯರು ಮುಖ್ಯ ಕಾರ್ಯನಿರ್ವಹಕ ಯಲ್ಲಪ್ಪ ಜಾಮಗೌಡ ವಿರುದ್ಧ ಹರಿಹಾಯ್ದರು.

ಕಾರ್ಯನಿರ್ವಾಹಕ ಅಧಿಕಾರಿ ಯಲ್ಲಪ್ಪ ಜಾಮಗೌಡ ವರದಿ ವಾಚನ ಒದಿದರು,ಮತ್ತು ನಿರಿಕ್ಷಕರು DCC ಬೆಳಗಾವಿಯ ಮಹಾಲಿಂಗ ಮರಡಿ ರೈತರಿಗೆ  DCC ಬ್ಯಾಂಕನಿಂದ ಕೋಡುವ ಸೌಲಭ್ಯದ ಬಗ್ಗೆ ರೈತರಿಗೆ ತಿಳಿಹೆಳಿದರು

ಈ ಸಂದರ್ಭದಲಿ ಶಂಕರ ಕರಬಸನವರ,ಆಡಳಿತಾಧಿಕಾರಿಗಳು ತಾಲೂಕಾ ಸಹಕಾರಿ ಅಭಿವೃದ್ಧಿ ಅಧಿಕಾರಿಗಳು,ಯಲ್ಲಪ್ಪ ಜಾಮಗೌಡ,ಮುಖ್ಯ ಕಾರ್ಯನಿರ್ವಹಕರು,ಮಹಾಲಿಂಗಮರಡಿ,ನಿರಿಕ್ಷಕರು DCC ಬ್ಯಾಂಕ್ ಬೆಳಗಾವಿ,ಹಾಗೂ ಹಾರೂಗೇರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ  ಕೃಷಿ ಸಹಕಾರಿ ಸಂಘದ  ಸದಸ್ಯರು ,ಸ್ಥಳಿಯರು ಭಾಗಿಯಾಗಿದ್ದರು.

What's Your Reaction?

like

dislike

love

funny

angry

sad

wow